ವಿದೇಶ ತರಕಾರಿ ಬೆಳೆವ ರೈತಗೆ ನೆರವುವಿದೇಶಿ ತರಕಾರಿ, ಸೊಪ್ಪುಗಳನ್ನು ಬೆಳೆದು ತೊಂದರೆ ಸಿಲುಕಿದ್ದ ರೈತರೊಬ್ಬರು ಅಧಿಕಾರಿಗಳು ಹಾಗೂ ರೈತ ಉತ್ಪಾದಕ ಕಂಪನಿ ನೆರವಿನಿಂದ ಮತ್ತೆ ಯಶಸ್ಸಿನ ಹಾದಿಗೆ ಬಂದಿದ್ದಾರೆ. ಶಿಗ್ಗಾಂವಿ ತಾಲೂಕಿನ ಮುನವಳ್ಳಿ ಗ್ರಾಮದ ಶಂಭುಲಿಂಗಪ್ಪ ಗು. ಮಡ್ಲಿ ಎಂಬ ರೈತ ತನ್ನ ೪.೪ ಎಕರೆ ಹೊಲದಲ್ಲಿ ೨೦೧೫ರಿಂದ ವಿದೇಶಿ ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಿದ್ದರು. ಆದರೆ ಕೊರೋನಾ ಸಂದರ್ಭದಲ್ಲಿ ತೀವ್ರ ತೊಂದರೆಗೆ ಸಿಲುಕಿದರು. ಈಗ ಶಂಭುಲಿಂಗಪ್ಪ ಆರ್ಥಿಕವಾಗಿ ಚೇತರಿಸಿಕೊಂಡಿದ್ದು, ಉತ್ತಮ ಮಾರುಕಟ್ಟೆ ಕಂಡುಕೊಂಡಿದ್ದಾರೆ.