ರಂಗಗ್ರಾಮ ಶೇಷಗಿರಿಯಲ್ಲಿ ೨೨ರಿಂದ ರಂಗ ಶಿಬಿರಹಾನಗಲ್ಲಿನ ರಂಗಗ್ರಾಮ ಶೇಷಗಿರಿಯಲ್ಲಿ ಡಿ. ೨೨ರಿಂದ ೨೭ರ ವರೆಗೆ ರಂಗ ಶಿಬಿರ ನಡೆಯಲಿದ್ದು, ರಾಜ್ಯದ ಖ್ಯಾತ ರಂಗ ತಜ್ಞರ ಮಾರ್ಗದರ್ಶನದಲ್ಲಿ ರಂಗ ತರಬೇತಿ, ೬ ನಾಟಕ ಪ್ರದರ್ಶನ ನಡೆಯಲಿವೆ. ಪ್ರತಿದಿನ ಬೆಳಗಿನಿಂದ ಸಂಜೆವರೆಗೆ ಶಿಬಿರಾರ್ಥಿಗಳಿಗೆ ರಂಗ ತರಬೇತಿ, ರಂಗಭೂಮಿ ಕುರಿತು ಚರ್ಚೆ, ನಾಟಕಗಳ ವಿಮರ್ಶೆ ನಡೆಯಲಿದೆ. ಸಂಜೆ ರಂಗ ಶಂಕರದ ಕಲಾವಿದರಿಂದ ಪ್ರತಿನಿತ್ಯ ಒಂದೊಂದು ನಾಟಕ ಪ್ರದರ್ಶನಗೊಳ್ಳುವುದು.