ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿದೆ ಶ್ವಾನಗಳ ಹಾವಳಿಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದು, ಯಾವ ರಸ್ತೆ, ಓಣಿಗಳಲ್ಲಿ ಹೋದರೂ ಹತ್ತಾರು ನಾಯಿಗಳ ಹಿಂಡೇ ಬೆನ್ನಟ್ಟಿ ಬರುತ್ತವೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಬಸ್ ನಿಲ್ದಾಣ ಸುತ್ತಮುತ್ತ, ಪಿಬಿ ರಸ್ತೆ, ಹಾನಗಲ್ಲ ರಸ್ತೆ, ಸುಭಾಸ ಸರ್ಕಲ್, ಬಸವೇಶ್ವರನಗರ, ರೈಲ್ವೆ ಸ್ಟೇಶನ್ ರಸ್ತೆ ಹೀಗೆ ಯಾವ ರಸ್ತೆ, ಓಣಿಗಳಿಗೆ ಹೋದರೂ ನಾಯಿಗಳ ಹಿಂಡೇ ಕಾಣುತ್ತವೆ. ಕೆಲವು ಕಡೆ ನಾಲ್ಕಾರು ನಾಯಿಗಳಿದ್ದರೆ, ಇನ್ನು ಕೆಲವು ಕಡೆಗಳ್ಲಲಂತೂ 15ರಿಂದ 20ರಷ್ಟು ಶ್ವಾನಗಳು ಗುಂಪಾಗಿರುತ್ತವೆ. ಹಗಲಿನ ವೇಳೆ ಅಲ್ಲಲ್ಲಿ ಮಲಗಿರುವ ನಾಯಿಗಳು, ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸುತ್ತವೆ.