ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಜೆಡಿಎಸ್ ತಂಡಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮದ ವಾಸ್ತವಿಕತೆ ಅಧ್ಯಯನ ಮಾಡಲು ಜೆಡಿಎಸ್ ಬರ ಅಧ್ಯಯನ ತಂಡವು ಬುಧವಾರ ಜಿಲ್ಲೆಯ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ತಾಲೂಕಿನ ಅಗಡಿ, ಕನವಳ್ಳಿ, ಹೊಸರಿತ್ತಿ, ಹಂದಿಗನೂರ ಗ್ರಾಮಗಳ ರೈತರ ಹತ್ತಿ, ಶೇಂಗಾ, ಮೆಕ್ಕೆಜೋಳದ ಜಮೀನುಗಳಿಗೆ ಭೇಡಿ ನೀಡಿ ಹಾನಿಗೊಳಾಗದ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು.