ಕೆರೆ ಒತ್ತುವರಿ ತೆರವಿಗೆ ಮುಂದಾದ ಆಡಳಿತಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆ ಒಳಗೊಂಡ ಹಾನಗಲ್ಲ ತಾಲೂಕಿನಲ್ಲಿ ೯೦೧ ಕೆರೆಗಳ ಸರ್ವೇ ಮೂಲಕ ಒತ್ತುವರಿ ತೆರವುಗೊಳಿಸಿ, ಅಳತೆಗನುಗುಣವಾಗಿ ಸುತ್ತಲೂ ಕಂದಕ ನಿರ್ಮಾಣಕ್ಕೆ ತಾಲೂಕು ಆಡಳಿತ ಮುಂದಾಗಿದೆ.ರಾಜ್ಯದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಲು ರಾಜ್ಯ ಸರ್ಕಾರದ ಆದೇಶಿಸಿದೆ. ಅದರಂತೆ ತಾಲೂಕಿನ ಎಲ್ಲ ೯೦೧ ಕೆರೆಗಳ ಸರ್ವೇ ಹಾಗೂ ಒತ್ತುವರಿ ಗುರುತಿಸಿ ತೆರವುಗೊಳಿಸುವತ್ತ ಸ್ಥಳೀಯ ಆಡಳಿತ ಚಿತ್ತ ನೆಟ್ಟಿದೆ. ೪೦ ಪರವಾನಿಗೆ ಪಡೆದ ಭೂಮಾಪಕರು, ೫ ಸರ್ಕಾರಿ ಭೂಮಾಪಕರು, ತಹಸೀಲ್ದಾರರನ್ನೊಳಗೊಂಡು ಮೇಲ್ವಿಚಾರಕರು, ೪೫ ಗ್ರಾಮ ಆಡಳಿತದ ಕಂದಾಯ ನಿರೀಕ್ಷಕರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.