ಡಾ.ಖರ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಿದ್ದಾರೆಕಾಂಗ್ರೆಸ್ ಪಕ್ಷವನ್ನ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ಹಾಕಿದ್ದು ತಾವಾದರೂ ಕೂಡ ಆ ಅವಧಿಗೆ ಎಸ್ ಎಂ ಕೃಷ್ಣ ಸಿಎಂ ಆದರು. ತಮ್ಮ ಶ್ರಮ ನೀರಲ್ಲಿ ಕೊಚ್ಚಿ ಹೋಯ್ತೆಂದು ವಿಜಯಪುರ ಸಭೆಯೊಂದರಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಸಿಎಂ ಗದ್ದುಗೆ ತಮಗೆ ದಕ್ಕಲಿಲ್ಲವೆಂದು ಅಸಮಾಧಾನ ತೋಡಿಕೊಂಡಿರೋದು ಇದೀಗ ರಾಜಕೀಯ ವಲಯದಲ್ಲಿ ಹಲವು ಬಗೆಯಲ್ಲಿ ಚರ್ಚೆಗೆ ಕಾರಣವಾಗಿದೆ.