ಎಲ್ಲರಿಗೂ ಸಮಾನ ಅವಕಾಶ ಕಲ್ಪಸಿದವರು ಬಸವಣ್ಣ: ಶ್ರೀಶೈಲ ಶ್ರೀ12ನೇ ಶತಮಾನವು ಕರ್ನಾಟಕದ ಸುವರ್ಣ ಯುಗವಾಗಿದ್ದು, ಜಾತಿ ರಹಿತ ಸಮಾಜವನ್ನು ಸೃಷ್ಟಿಸಲು ಜಾತಿ ಅಡೆತಡೆಗಳನ್ನು ಮುರಿದು, ಬಣ್ಣ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸಿದವರು ಮಹಾತ್ಮ ಬಸವೇಶ್ವರರು ಎಂದು ಆಂಧ್ರಪ್ರದೇಶದ ಶ್ರೀಶೈಲಂನ ಸಾರಂಗ ಮಠದ ಜಗದ್ಗುರು ಡಾ.ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.