ಕನ್ನಡ ಎನ್ನುವುದು ನುಡಿಯಲ್ಲ, ಮನಸ್ಸು ಬೆಸೆಯುವ ಭಾಷೆಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದಿರುವ ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ. ಕನ್ನಡ ಎನ್ನುವುದು ಬರಿ ನುಡಿಯಲ್ಲ, ಅದು ಮನಸ್ಸುಗಳನ್ನು ಬೆಸೆಯುವ ಭಾಷೆ. ಆದ್ದರಿಂದ ಕಲೆ, ಸಾಹಿತ್ಯ, ನೆಲ, ಜಲ ಉಳಿಸುವುದು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಪ್ರಭಾರ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಆಶಯ ವ್ಯಕ್ತಪಡಿಸಿದರು.