7 ಜನ ಬಾಲ ಕಾರ್ಮಿಕರ ರಕ್ಷಣೆಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿಯ ಲಾಡ್ಲಾಪೂರ, ನಾಲವಾರ ಮತ್ತು ಸನ್ನತಿ ರೋಡ್ನ ಹತ್ತಿ ಹೊಲದಲ್ಲಿ ಹಠಾತ್ ದಾಳಿ ನಡೆಸಿ 7 ಜನ ಬಾಲಕಿಯರನ್ನು ರಕ್ಷಿಸಿ, ಸರ್ಕಾರಿ ಬಾಲಕಿರ ಮಂದಿರದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರಾದ ಡಾ.ಅವಿನಾಶ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.