ಕೇಂದ್ರ ಯೋಜನೆಗಳು ಜನಸಾಮಾನ್ಯರಿಗೆ ವರ: ಭಗವಂತ ಖೂಬಾಕೇಂದ್ರ ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ವರವಾಗಿವೆ. 3.55 ಲಕ್ಷ ಜನರಿಗೆ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್, ಎಲ್ಲಾ ಬಡವರಿಗೆ ಉಚಿತವಾಗಿ 5ಕೆ.ಜಿ. ಅಕ್ಕಿ, 5 ಲಕ್ಷದವರೆಗೆ ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ, ಪಿಎಂ ಕಿಸಾನ್ ಯೀಜನೆಯಡಿ ವರ್ಷಕ್ಕೆ 6 ಸಾವಿರ ರುಪಾಯಿ ಪ್ರೋತ್ಸಾಹ ಧನ, ಮುಂತಾದ ಲಾಭಗಳು ಯಾವುದೆ ಜಾತತಿ, ಜನಾಂಗ ನೋಡದೆ ಎಲ್ಲರಿಗೂ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.