ಪ್ರಾಣಿಬಲಿ ತಡೆಗೆ ಕಾವಿ ಭಕ್ತಿ, ಖಾಕಿ ಶಕ್ತಿ!ಸುರಪುರ ತಾಲೂಕಿನ ದೇವಿಕೇರಾದಲ್ಲಿ ಎರಡು ದಿನಗಳ ಕಾಲ ನಡೆಯುವ ಗ್ರಾಮ ದೇವತೆ ಜಾತ್ರೆ ವೇಳೆ ಅಂಸಖ್ಯಾತ ಕುರಿ-ಕೋಣಗಳ ಬಲಿ ನೀಡಲಾಗುತ್ತಿದ್ದು, ಇದನ್ನು ತಡೆಯಬೇಕು ಎಂಬ ದಲಿತ ಸಂಘರ್ಷ ಸಮಿತಿಯ ಮನವಿ ಹಿನ್ನೆಲೆಯಲ್ಲಿ ಹಾಗೂ ದಲಿತ ಸಮುದಾಯದ ಒಂದು ವರ್ಗಕ್ಕೆ ಬಲಿ ಮಾಂಸ ತಿನ್ನುವಂತೆ ಒತ್ತಡ ಹೇರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಪ್ರಾಣಿ ಬಲಿ ತಡೆಯುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸ್ಥಳದಲ್ಲಿ ಭಾರಿ ಪೊಲೀಸ್ ಕಾವಲು ಹಾಕಲಾಗಿದೆ.