• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kalaburagi

kalaburagi

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕಲಬುರಗಿ ಕೌಶಲ್ಯ ಕೇಂದ್ರಕ್ಕೆ ಒತ್ತು
ಕಲಬುರಗಿಯನ್ನು ಕೌಶಲ್ಯ ಕೇಂದ್ರವಾಗಿಸುತ್ತೇವೆಂದ ಪ್ರಿಯಾಂಕ್‌ ಖರ್ಗೆ ಬೆಂಗಳೂರು ಹೊರತುಪಡಿಸಿ ಅದ್ಹೇಗೆ ಕೌಶಲ್ಯವನ್ನ ರಾಜ್ಯದ ಇತರೆ ನಗರಗಳಿಗೆ ಕೊಂಡೊಯ್ಯುವ ಸಾಧ್ಯಾಸಾಧ್ಯತೆಗಳನ್ನೆಲ್ಲ ಪರಿಶೀಲಿಸಿ ಸಲಹೆ. ಸೂಚನೆ ನೀಡುವುದಕ್ಕೇ ಕೌಶಲ್ಯ ಸಲಹಾ ಪರಿಷತ್ತನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಕಾಟ ಕಲಬುರಗಿ ಸಿಮೆಂಟ್‌ ಕಂಪನಿ ಮುಂದೆ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ಮತ್ತು ಬೆಂಬಲಿಗರ ಪ್ರತಿಭಟನೆ
ಛತ್ರಸಾಲ ಗ್ರಾಮದಲ್ಲಿ ಕಳೆದ ೧೪ ವರ್ಷಗಳಿಂದ ಸ್ಥಾಪಿತವಾಗಿರುವ ವಿಕಾಟ ಕಲಬುರಗಿ ಸಿಮೆಂಟ್‌ ಕಂಪನಿಯಲ್ಲಿ ಜಮೀನು ಕಳೆದುಕೊಂಡವರಿಗೆ ಉದ್ಯೋಗ, ಮಕ್ಕಳಿಗೆ ಶಿಕ್ಷಣ ಹಾಗೂ ಮೂಲ ಸೌಕರ್ಯಗಳನ್ನು ನೀಡದೇ ಗಡಿಪ್ರದೇಶ ಜನರಿಗೆ ಕಂಪನಿ ವಂಚಿತಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಕಾಟ ಕಲಬುರಗಿ ಸಿಮೆಂಟ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.
ಕೆಂಬಾಳೆ, ತೊಗರಿ, ಸಿರಿಧಾನ್ಯಗಳಿಗೆ ಮಾರುಕಟ್ಟೆ ಕಲ್ಪಿಸಿ: ಪ್ರಿಯಾಂಕ್‌ ಖರ್ಗೆ
ಕಲಬುರಗಿಯ ಕಮಲಾಪೂರದಲ್ಲಿ ಬೆಳೆಯುವ ಕೆಂಬಾಳೆ, ಏಶಿಯಾದಲ್ಲಿಯೆ ಗುಣಮಟ್ಟದಿಂದ ಕೂಡಿರುವ ಇಲ್ಲಿ ಬೆಳೆಯುವ ತೊಗರಿ, ಸಿರಿಧಾನ್ಯ ಸೇರಿದಂತೆ ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ವೇದಿಕೆ ಮತ್ತು ಬ್ಯಾಂಡಿಂಗ್ ಗೆ ಎಕ್ಸಿಲೆನ್ಸ್ ಸೆಂಟರ್ ಸ್ಥಾಪನೆಗೆ ಮುಂದಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬ್ಯಾಂಕ್‌ ಸಾಲಕ್ಕೆ ಗೃಹಲಕ್ಷ್ಮೀ ಭರ್ತಿ: ಪ್ರಿಯಾಂಕ್ ಖರ್ಗೆ ಅಸಮಾಧಾನ
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕ ನೀಡಲಾಗುವ 2,000 ರು. ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕಾರಣ ಬ್ಯಾಂಕ್ ಅಧಿಕಾರಿಗಳು ಈ ಹಣವನ್ನು ಫಲಾನುಭವಿ ಸಾಲದ ವಸೂಲಾತಿಗೆ ಬಳಕೆ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಋಣ ಹೇಗೆ ತೀರಿಸಲಿ: ಸಚಿವ ಪ್ರಿಯಾಂಕ್ ಖರ್ಗೆ
ಚಿತ್ತಾಪುರ ತಾಲೂಕಿನ ಕೊಲ್ಲೂರ ಗ್ರಾಮದಲ್ಲಿ ೨೦೧೮-೧೯ನೇ ಸಾಲಿನ ಡಿಎಂಎಫ್ ಯೊಜನೆಯಡಿ ಕೊಲ್ಲೂರ ಗ್ರಾಮದಿಂದ ಬನ್ನಟ್ಟಿಯವರೆಗೆ ₹೫.೭೦ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅಡಿಗಲ್ಲು
ಕೆಲಸ ಅರಸಿ ನಮ್ಮ ಊರ್ ಬಿಟ್ಟ ಹೊಂಟೇವ್ ನಾವು
ಪ್ರಸ್ತುವ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ಇದೀಗ ಕೆಲಸವನ್ನರಸಿ ಊರೂರು ತಿರುಗುವಂತಾಗಿದೆ. ಅಫಜಲ್ಪುರ ತಾಲೂಕಿನ ಕೃಷಿ ಕಾರ್ಮಿಕರು ಕೆಲಸವಿಲ್ಲದೇ ಇಟ್ಟಂಗಿ ಭಟ್ಟಿಗಳತ್ತ ಮುಖ ಮಾಡಿ ಗುಳೆ ಹೋಗುತ್ತಿದ್ದಾರೆ. ಇನ್ನಾದರೂ ತಡಮಾಡದೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿಯು ಎಚ್ಚೆತ್ತು ಉದ್ಯೋಗ ಖಾತ್ರಿ ಯೋಜನೆಯಡಿ ದುಡಿವ ಕೈಗಳಿಗೆ ಸಮರ್ಪಕ ಕೆಲಸ ಒದಗಿಸುವ ಕೆಲಸ ಮಾಡಬೇಕಿದೆ.
ಕಲಬುರಗಿ ಅಂಗನವಾಡಿ ಮಕ್ಕಳಿಗೆ 2 ತಿಂಗಳಿಂದ ಮೊಟ್ಟೆ ಇಲ್ಲ!
ಕಲಬುರಗಿ ಜಿಲ್ಲೆಯ 3500 ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯ ಭಾಗವಾಗಿ ವಿತರಿಸುತ್ತಿದ್ದ ಮೊಟ್ಟೆ ಕಳೆದ ಎರಡು ತಿಂಗಳಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ಅಚ್ಚರಿಯ ಸಂಗತಿ ಅಂದರೆ ಮೊಟ್ಟೆ ವಿತರಣೆ ಸ್ಥಗಿತಗೊಂಡು 2 ತಿಂಗಳಾಯ್ತು ಎಂಬಂಶ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನವೀನ್‌ ಅವರಿಗೂ ಗೊತ್ತಿಲ್ಲ!
ಐಟಿ ವಲಯದಲ್ಲಿ ರಾಜ್ಯ ಉನ್ನತ ಸ್ಥಾನ ಪಡೆದಿದೆ: ಪ್ರಿಯಾಂಕ್ ಖರ್ಗೆ
ರಾಜ್ಯದ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಕೇಂದ್ರಗಳು ಮತ್ತು ಬಹುಖ್ಯಾತಿಯ ಇಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿ ವರ್ಷ ತನ್ನ ಉನ್ನತ ಅರ್ಹತೆ ಹೊಂದಿರುವ ತಾಂತ್ರಿಕ ಮಾನವ ಸಂಪನ್ಮೂಲಗಳೊಂದಿಗೆ ಸುಸಜ್ಜಿತಗೊಂಡ ಉನ್ನತ ಸ್ಥಾನವನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸುತ್ತಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಅಭಿಮತ ವ್ಯಕ್ತಪಡಿಸಿದರು.
ಕೈಗಾರಿಕೆ-ಅಕಾಡೆಮಿಯ ಸಹಯೋಗ ಇಂದಿನ ಅಗತ್ಯ: ಮಾಡ್ಯಾಳ್ಕರ್
ಘಟಿಕೋತ್ಸವ ಭಾಷಣ: ಭೌತಿಕ ಮತ್ತು ಡಿಜಿಟಲ್ ಪ್ರಪಂಚದ ನಡುವಿನ ರೇಖೆಗಳು ಮಸುಕಾಗುತ್ತಿವೆ. ಅನ್ವೇಷಿಸಲು ಅತ್ಯಾಕರ್ಷಕ ಮತ್ತು ಪರಿವರ್ತಕ ಭೂದೃಶ್ಯವನ್ನು ಸೃಷ್ಟಿಸುತ್ತಿವೆ. ಭವಿಷ್ಯವು ಕಾಲ್ಪನಿಕವಲ್ಲ ಏಕೆಂದರೆ 6ಉ ನಂತಹ ನೆಟ್‍ವರ್ಕ್‍ಗಳು ಊಹಿಸಲಾಗದ ವೇಗವನ್ನು ನೀಡುತ್ತದೆ ಎಂದು ಹಿರಿಯ ಟೆಕ್ನೋಕ್ರಾಟ್ ಮತ್ತು ಐಬಿಎಂ ಇನ್ನೋವೇಶನ್ ಸೆಂಟರ್ ಫಾರ್ ಎಜುಕೇಶನ್ ಮತ್ತು ಸೌತ್ ಏಷಿಯಾ ಎಕ್ಸ್‌ಪರ್ಟ್‌ ಲ್ಯಾಬ್‍ನ ನಿರ್ದೇಶಕ ವಿಠಲ್ ಮಾಡ್ಯಾಳ್ಕರ್ ಅಭಿಪ್ರಾಯಪಟ್ಟರು.
ಕೇಂದ್ರದಿಂದ ನರೇಗಾ ಯೊಜನೆಯ ₹೬೦೦ ಕೊಟಿ ಬಾಕಿ: ಪ್ರಿಯಾಂಕ್
ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವ ನರೇಗಾ ಯೊಜನೆ ಕಾಮಗಾರಿಯಿಂದ ೧೦೦ ದಿನಗಳ ಕೆಲಸ ನೀಡುತ್ತಿದ್ದು, ರಾಜ್ಯದಲ್ಲಿ ಭೀಕರ ಬರಗಾಲದಲ್ಲಿ ಇದನ್ನು ೧೫೦ ದಿನಗಳಿಗೆ ಹೆಚ್ಚಳ ಮಾಡಬೇಕು ಎಂದು ನಮ್ಮ ಸರ್ಕಾರವು ಒತ್ತಾಯಿಸುತ್ತಿದ್ದರೂ ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂಧಿಸದೆ ಕೆಲಸ ಮಾಡಿರುವ ೧೦೦ ದಿನಗಳ ವೇತನದಲ್ಲಿಯೇ ಸುಮಾರು ೬೦೦ ಕೊಟಿ ಅನುದಾನವನ್ನು ನೀಡದೇ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.
  • < previous
  • 1
  • ...
  • 202
  • 203
  • 204
  • 205
  • 206
  • 207
  • 208
  • 209
  • 210
  • 211
  • 212
  • next >
Top Stories
ಪುಸ್ತಕಕ್ಕಾಗಿ ‘ತಮಿಳು’ ಕನ್ನಡಾಭಿಮಾನಿಯ ವರ್ಷಪೂರ್ತಿ ಸಂಚಾರ!
ಹಿಂದಿ, ಇಂಗ್ಲಿಷ್‌ ದಾಳಿಯಿಂದ ಕನ್ನಡ ರಕ್ಷಿಸಬೇಕಿದೆ : ಡಿಕೆಶಿ
ಸಮಾಜಮುಖಿಯಾಗಿದ್ದರೆ ಬದುಕು ಸಾರ್ಥಕ : ಸಿಎಂ ಸಿದ್ದರಾಮಯ್ಯ
‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡ ನಂತರ : ಕತ್ತಲ ಹಗಲುಗಳು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved