ಶರಣಬಸವೇಶ್ವರ ಅಂತರವಾಣಿಗೆ ರಾಷ್ಟ್ರೀಯ ಪುರಸ್ಕಾರವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಸ್ವೀಕರಿಸಿದ ಪ್ರಕಟಣೆಯ ಪ್ರಕಾರ, ‘ಸುಸ್ಥಿರತೆಯ ಮಾದರಿ ಪ್ರಶಸ್ತಿಗಳು’ ವಿಭಾಗದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು ಇದು ೫೦,೦೦೦ ರೂಪಾಯಿ ನಗದು ಬಹುಮಾನ, ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ.