ಮಹಾತ್ಮ ಗಾಂಧೀಜಿ ಜಯಂತಿ ಅದ್ಧೂರಿ ಆಚರಣೆ: ರಾಯಪ್ಪ ಹುಣಸಗಿಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ. ಜಯಂತಿಗೆ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೂಚನೆ ನೀಡಿದರು.ಅ.2ರಂದು ಬೆಳಗ್ಗೆ 9 ಗಂಟೆಗೆ ಟೌನ್ ಹಾಲಿನಲ್ಲಿರುವ ಗಾಂಧೀಜಿ ಪ್ರತಿಮೆ ಮೊದಲು ಮಾಲಾರ್ಪಣೆ ಮಾಡಿ ಡಾ. ಎಸ್. ಪಂಡಿತ ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.