15ರಿಂದ ಬೆಂಗಳೂರಿನಲ್ಲಿ ‘ಪುಸ್ತಕ ಸಂತೆ’: ಕೊಡಗಿನ ಲೇಖಕರು ಭಾಗಿಕನ್ನಡ ಪುಸ್ತಕ ಸಂಸ್ಕೃತಿ ಇಮ್ಮಡಿಗೊಳಿಸುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ವರ್ಷದ ‘ವೀರಲೋಕ ಪುಸ್ತಕ ಸಂತೆ’ಗೆ ಭಾರೀ ತಯಾರಿ ನಡೆದಿದೆ ಎಂದು ವೀರಲೋಕ ಪ್ರಕಾಶನದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಒಂದೇ ಸೂರಿನಡಿ ನೂರಕ್ಕೂ ಅಧಿಕ ಲೇಖಕರು, ಪ್ರಕಾಶಕರು, ನ.15,16,17 ರಂದು ಜಯನಗರದ ಅಲಂಕೃತ ಶಾಲಿನಿ ಮೈದಾನದಲ್ಲಿ ಭೇಟಿಗೆ ಲಭ್ಯವಾಗಲಿದ್ದಾರೆ.