ಭೂಕೂಸಿತದಲ್ಲಿ ಬದುಕುಳಿದ ಪಲ್ಲವಿಗೆ ಡಾಕ್ಟರೇಟ್ ಪದವಿ2006ರಲ್ಲಿ ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎರಡು ಕುಟುಂಬಗಳಿಗೆ ಸೇರಿದ 6 ಮಂದಿ ಭೂಸಮಾಧಿಯಾಗಿದ್ದರು. ಭೀಕರ ಭೂಕುಸಿತದಲ್ಲಿ ಕುಸಿದ ಬರೆಯಡಿ ಸಿಲುಕಿ, ತನ್ನ ತಾಯಿ, ತಂಗಿ, ತಮ್ಮನನ್ನು ಕಳೆದುಕೊಂಡರೂ ಪಲ್ಲವಿ ಮಾತ್ರ ಜೀವಂತವಾಗಿ ಉಳಿದಿದ್ದರು. ಅವರೀಗ ಮಂಗಳೂರು ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದು ಸಾಧಕರಿಗೆ ಮಾದರಿಯಾಗಿದ್ದಾರೆ.