ಸೋಮವಾರಪೇಟೆ: ಪ್ರತೀಕ್ಷ, ವಿಲೋಕನ ಕೃತಿ ಬಿಡುಗಡೆಕೊಡಗು ಜಿಲ್ಲಾ ಮತ್ತು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ , ಮಹಿಳಾ ಸಹಕಾರ ಸಮಾಜ, ಅಕ್ಕನ ಬಳಗ ಆಶ್ರಯದಲ್ಲಿ ಕವಯತ್ರಿ ಜಲಜಾಶೇಖರ್ ಅವರ ‘ಪ್ರತೀಕ್ಷ’ ಮತ್ತು ‘ವಿಲೋಕನ’ ಕೃತಿಗಳ ಬಿಡುಗಡೆ ಸಮಾರಂಭ ಮಂಗಳವಾರ ಮಹಿಳಾ ಸಹಕಾರ ಸಮಾಜದಲ್ಲಿ ನಡೆಯಿತು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ನಿವೃತ್ತ ಪ್ರಾಂಶುಪಾಲ ಪ್ರೊ.ಧರ್ಮಪ್ಪ ಕೃತಿ ಬಿಡುಗಡೆಗೊಳಿಸಿದರು.