ಕುಂಡ್ಯೋಳಂಡ ಹಾಕಿ ಕಾರ್ನಿವಲ್ಗೆ ಕ್ಷಣಗಣನೆಹಾಕಿ ಉತ್ಸವ ಕೇವಲ ಪಂದ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಲವು ವಿಶೇಷ ಆಕರ್ಷಣೆಗಳು ಕೂಡ ಆಯೋಜಿಸಲಾಗಿದೆ. ಸೈನ್ಯಕ್ಕೆ ಸೇರಲು ಬಯಸುವ ಮಕ್ಕಳಿಗೆ ಸೇನಾಧಿಕಾರಿಗಳಿಂದ ತರಬೇತಿ, ಕೊಡವರ ಸಾಂಪ್ರದಾಯಿಕ ಆಹಾರ ಪದ್ಧತಿ ಸೇರಿದಂತೆ ವಿವಿಧ ಆಹಾರ ಪದ್ಧತಿ ಪರಿಚಯಿಸುವ ಉದ್ದೇಶದಿಂದ ಆಹಾರಮೇಳ, ವಧು-ವರರ ಸಮಾವೇಶ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ.