ಚೆಟ್ಟಳ್ಳಿಯಲ್ಲಿ ವೈವಿಧ್ಯಮಯ ಹಣ್ಣುಗಳ ಪ್ರದರ್ಶನ-100ಕ್ಕೂ ಅಧಿಕ ತಳಿ ಪ್ರದರ್ಶನಕೊಡಗಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಬುಧವಾರ ಫ್ಯಾಷನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ವೈವಿಧ್ಯತೆಯ ಪ್ರದರ್ಶನ ಮತ್ತು ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಕೃಷಿಕರಿಂದ ಸುಮಾರು 80ಕ್ಕೂ ಅಧಿಕ ಬಗೆಯ ಪಪ್ಪಾಯ ತಳಿಗಳು, 40ಕ್ಕೂ ಅಧಿಕ ಫ್ಯಾಷನ್ ಫ್ರೂಟ್ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.