ಸೋ.ಪೇಟೆ: ಕಾಫಿ ಬೆಳೆಗಾರರ ಕುಂದುಕೊರತೆ ಸಭೆಸಭೆಯಲ್ಲಿ ಪಾಲ್ಗೊಂಡಿದ್ದ ಬೆಳೆಗಾರರು, ಕಾರ್ಮಿಕರ ವೇತನ ಮತ್ತು ಕೆಲಸದ ಸಮಯವನ್ನು ನಿಗದಿಗೊಳಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲ ತೋಟಗಳಲ್ಲಿ ಕಾರ್ಮಿಕರು ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಕೆಲಸ ಮಾಡಬೇಕು. ಕಾರ್ಮಿಕರ ವೇತನ ಮತ್ತು ಪಿಕ್‍ಅಪ್ ವಾಹನದ ಬಾಡಿಗಗೆ ಸಂಬಂಧಿಸಿದಂತೆ ಮೇ 6ರಂದು ಮತ್ತೊಮ್ಮೆ ಬೆಳೆಗಾರರು, ಪಿಕ್‍ಅಪ್ ಮಾಲೀಕರು ಹಾಗೂ ಕಾರ್ಮಿಕ ಮುಖಂಡರೊಡನೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸಭೆ ತೀರ್ಮಾನಿಸಿತು.