ಭತ್ತದ ಬೆಳೆಗೆ ಕೀಟಬಾಧೆ<bha>;</bha> ಫಸಲು ನಷ್ಟದ ಆತಂಕದಲ್ಲಿ ರೈತರುಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಭತ್ತ ಬೇಸಾಯದ ಕಾಯಕದಲ್ಲಿ ಪ್ರತಿವರ್ಷ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷದ ಮುಂಗಾರಿನಲ್ಲಿ ಮಳೆ ವಿಳಂಬವಾದ ಕಾರಣ ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ಮಾಡಲು ಹಲವು ಸಮಸ್ಯೆಗಳ ಮಧ್ಯೆಯೂ ಭತ್ತದ ನಾಟಿ ಕಾರ್ಯಗಳನ್ನ ಮುಗಿಸಿದರು. ಆದರೆ ಈಗ ಭತ್ತದ ಬೆಳೆಗೆ ಕೀಟ ಬಾಧೆ ಕಾಡುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ.