ನಗರದೆಲ್ಲೆಡೆ ಗಜಮುಖನ ಪ್ರತಿಷ್ಠಾಪನೆ ಸಂಭ್ರಮ ಹೊರ ರಾಜ್ಯಗಳ ಹೂ ಮಾರುಕಟ್ಟೆಗೆ ಬಂದಿದ್ದರೂ ಹೂವಿನ ಬೆಲೆ ಕಡಿಮೆಯಾಗಿಲ್ಲ, ಬಟನ್ ರೋಸ್ ಈಗ ೨೦೦ ರಿಂದ ೨೫೦ರೂ, ಸೇವಂತಿ ಕೆಜಿಗೆ ೨೫೦ ರೂಗಳಿಂದ ೩೦೦, ಮಲ್ಲಿಗೆ ೧೦೦೦ ರೂನಿಂದ ೧೨೦೦ರೂ, ಕನಕಾಂಬರ ಅದರ ಹೆಸರೇ ಹೇಳುವಂತೆ ಕನಕದಂತೆ ಬೆಲೆ ಏರಿಸಿಕೊಂಡು ಕೆಜಿಗೆ ೧೮೦೦ ದಾಟಿದೆ. ಅಕ್ಕಿ, ಬೆಲ್ಲ, ಶೇಂಗಾ, ಎಣ್ಣೆಗಳು ಹಬ್ಬಕ್ಕೆ ಮೊದಲೇ ಬೆಲೆ ಹೆಚ್ಚಾಗಿತ್ತು.