ಭೂಮಿ, ಪರಿಸರ ಮುಂದಿನ ಪೀಳಿಗೆಗಾಗಿ ರಕ್ಷಿಸಿಭೂಮಿ ತಾಯಿ ಎಲ್ಲ ಜೀವ ಸಂಕುಲಗಳಿಗೂ ಆಶ್ರಯದಾತೆ. ಆದರೆ ಇಂದು ಮನುಷ್ಯನ ಸ್ವಾರ್ಥಕ್ಕೆ ಭೂಮಿ ವಿನಾಶದತ್ತ ಸಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ, ಜಾಗತಿಕ ತಾಪಮಾನ ಏರಿಕೆ, ಶಾಖ ಹೆಚ್ಚಳ, ಪ್ರವಾಹ ಮತ್ತು ಕಾಡ್ಗಿಚ್ಚಿನಂತಹ ಸಮಸ್ಯೆಗಳು ತೀರಾ ಹೆಚ್ಚಾಗುತ್ತಿವೆ.