ತನಿಮಡಗು ರಸ್ತೆ ಗುಂಡಿಗೆ ಮುಕ್ತಿ ನೀಡಲಿತನಿಮಡಗು ಗ್ರಾಮದ ಮೂಲಕ ಬಿಸಾನತ್ತಂ ರೈಲು ನಿಲ್ದಾಣ, ರಾಮಸಂದ್ರ, ಬೋಡಗೊರ್ಕಿ ಹಾಗೂ ಆಂಧ್ರದ ಕುಪ್ಪಂಗೂ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಾಗಿದೆ. ವರ್ಷಗಳೇ ಕಳೆದರೂ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ.