ಜನರನ್ನು ಕಚೇರಿಗೆ ಅಲೆದಾಡಿಸದಂತೆ ಕೆಲಸ ಮಾಡಿ: ಶಾಸಕ ನಾರಾಯಣಸ್ವಾಮಿ೨೬೬ ಗ್ರಾಮಗಳಲ್ಲಿ ಜೆಜೆಎಂ ಮೂಲಕ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ೧೮೦ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ೪೨ ಗ್ರಾಮಗಳು ಟೆಂಡರ್ ನಲ್ಲಿವೆ. ಭಾವರಹಳ್ಳಿ, ಅಬ್ಬಿಗಿರಿಹೊಸಹಳ್ಳಿ ಮತ್ತು ಚಿಕ್ಕ ಹೊಸಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹೊಸ ಬೋರ್ ವೆಲ್ಗಳನ್ನು ಕೊರೆಸಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ.