ಪ್ರಾಚೀನ ಗಮಕ ಕಲೆ ಉಳಿಸಿ, ಬೆಳೆಸಬೇಕುಗಮಕ ಎನ್ನುವುದು ಪದ್ಯ ಮತ್ತು ಚಂಪೂ ಕಾವ್ಯಗಳನ್ನು ರಾಗಬದ್ಧವಾಗಿ ಓದುವ ಒಂದು ವೈಶಿಷ್ಟಮಯ ಪದ್ದತಿ. ಓದುವಾಗ ಸಂಗೀತದ ರಾಗಗಳನ್ನು ಬಳಸಿದರೂ, ಕಾವ್ಯದ ಅರ್ಥ, ಭಾವ ಮತ್ತು ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು, ರಸಭಾವ ಕೆಡದಂತೆ, ಕವಿ ಬಳಸಿದ ಛಂದಸ್ಸು,ರಾಗ ಮತ್ತು ಶೃತಿ ಬದ್ಧವಾಗಿ ಕಾವ್ಯವನ್ನು ಓದುವುದೇ ಗಮಕ ಕಲೆ