ತುಂಗಭದ್ರಾ ನದಿ ಪ್ರವಾಹ, ಪಂಪಾಸರೋವರ ಜಲಾವೃತಕಳೆದ ಒಂದು ವಾರದಿಂದ ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಪಂಪಾಸರೋವರ, ವಿಜಯಲಕ್ಷ್ಮೀ ದೇಗುಲ, ಹಳೇ ಸೇತುವೆ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳು ಜಲಾವೃತಗೊಂಡಿವೆ. ಪ್ರಸ್ತುತ ನದಿಗೆ 1 ಲಕ್ಷ 80 ಸಾವಿರ ಕ್ಯುಸೆಕ್ ನೀರು ಬಿಡಲಾಗಿದ್ದು, ಋಷಿ ಮುಖ ಪರ್ವತ ಸುತ್ತಲು ನೀರು ತುಂಬಿದೆ.