ನಿಂತ ಮಳೆ ನೀರು ತೆರವಿಗೆ ಮುಂದಾದ ನಗರಸಭೆಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಅಂತಹ ಸ್ಥಳಗಳಿಗೆ ಪೌರಾಯುಕ್ತ ಗಣೇಶ ಪಾಟೀಲ ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆ ನೀರು ತೆರವಿಗೆ ಕಾರ್ಯ ಕೈಗೊಂಡರು.