ಗವಿಮಠದ ಜಾತ್ರೋತ್ಸವ: ಭಕ್ತಿಯಿಂದ ಸಮರ್ಪಣೆ ಆಗುತ್ತಿವೆ ರೊಟ್ಟಿ, ಧಾನ್ಯಜಾತ್ರೆಯ ದಿನಗಳು ಸಮೀಪ ಆಗಿದ್ದು, ವಾರಗಳಿಂದ ಭಕ್ತರು ರೊಟ್ಟಿ, ಧಾನ್ಯ ಸಂಗ್ರಹಿಸಿ ಗವಿಮಠಕ್ಕೆ ತರುತ್ತಿದ್ದಾರೆ. ಮಹಾರಥೋತ್ಸವದಿನ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಲಿದ್ದಾರೆ. ಈಗಾಗಲೇ ಭಕ್ತರು ರೊಟ್ಟಿ ತಯಾರಿಸಿ ನೀಡುತ್ತಿದ್ದಾರೆ. ಸುಮಾರು 16 ಲಕ್ಷದಷ್ಟು ರೊಟ್ಟಿ ಸಂಗ್ರಹವಾಗುವ ನಿರೀಕ್ಷೆಯಿದೆ.