ಹೆಂಡ ಹಣ ಹಂಚಿ ಅಧಿಕಾರಕ್ಕೆ ಬರುವ ಸರ್ಕಾರ ಕಿತ್ತೊಗೆಯಿರಿ: ಕೆಆರ್ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರಡ್ಡಿಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಂಡ ಜೆಸಿಪಿ ಪಕ್ಷಗಳು ಎಲ್ಲವೂ ಒಂದೇ ನೀತಿ ಅನುಸರಿಸುತ್ತಿವೆ. ಜಾತಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ಅಧಿಕಾರ ನಡೆಸುತ್ತಿವೆ. ಇಂತಹವರಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ. ಜನರು ಸಹ ಉದ್ಧಾರವಾಗುವುದು ಇವರಿಗೆ ಬೇಕಾಗಿಲ್ಲ. ಈ ಕಾರಣಕ್ಕಾಗಿಯೆ ಕೆಟ್ಟ ಯೋಜನೆ ಜಾರಿ ಮಾಡುವುದು ಮತ್ತು ಬಡವರು ಬಡವರಾಗಿಯೇ ಇರುವಂತೆ ಮಾಡುತ್ತಾರೆ.