ಗಂಗಾವತಿಯ ಸಣಾಪುರ ಸಮತೋಲನ ಜಲಾಶಯದಲ್ಲಿ ಅನಧಿಕೃತ ತೆಪ್ಪ ಸಂಚಾರಅಂಜನಾದ್ರಿಯ ಸನಿಹದಲ್ಲಿರುವ ಸಣಾಪುರ ಸಮಾತೋಲನ ಜಲಾಶಯ, ಹಳೇ ಪ್ರವಾಸಿ ಮಂದಿರ ಹತ್ತಿರವಿರುವ ತುಂಗಭದ್ರಾ ನದಿ ಮತ್ತು ಋಷಿ ಪರ್ವತದಲ್ಲಿರುವ ನದಿಯಲ್ಲಿ ಸುಮಾರು 65ರಿಂದ 70 ತೆಪ್ಪ (ಹರಿಗೋಲು) ಸಂಚರಿಸುತ್ತಿವೆ. ಈ ಸಂಚಾರಕ್ಕೆ ಯಾವುದೇ ಇಲಾಖೆಯ ಅನುಮತಿ ಇಲ್ಲ. ರಾಜಾರೋಷವಾಗಿ ತೆಪ್ಪಗಳನ್ನು ಹಾಕುತ್ತಿದ್ದಾರೆ.