ಪಶ್ಚಕಂಥಿ ಮಠದ ಉತ್ತರಾಧಿಕಾರಿಗೆ ಪಟ್ಟಾಧಿಕಾರಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಪಶ್ಚಕಂಥಿ ಹಿರೇಮಠ, ಕುಷ್ಟಗಿ, ಗೆಜ್ಜೆಬಾವಿ, ಜಲಕಮಲದಿನ್ನಿ ಗುಡದೂರ ಮಠಗಳ ಸ್ಥಿರ ಹಾಗೂ ಚರ ಮಠಗಳ ನೂತನ ಉತ್ತರಾಧಿಕಾರಿಯ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಸಡಗರ ಹಾಗೂ ಸಂಭ್ರಮದೊಂದಿಗೆ ನೆರವೇರಿತು. ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ನಿಡಶೇಸಿ ಗ್ರಾಮದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದಂಡಕ ಮಂಡಲ ದೀಕ್ಷೆ, ಉಪದೇಶಾಮೃತ, ಮುದ್ರೆಯುಂಗುರ, ಕಿರೀಟ ಧಾರಣೆ ಇತರೆ ವಿಧಿ ವಿಧಾನಗಳೊಂದಿಗೆ ಅನೇಕ ಮಠಾಧೀಶರ ಸಾನ್ನಿಧ್ಯದಲ್ಲಿ ಮರುಳಸಿದ್ದ ಶಿವಾಚಾರ್ಯರು ವಿಶ್ವರಾಧ್ಯ ದೇವರಿಗೆ ಕರಿಬಸವ ಶಿವಾಚಾರ್ಯರು ಎಂಬ ನಾಮಕರಣದೊಂದಿಗೆ ಪಟ್ಟಾಧಿಕಾರದ ಕಾರ್ಯಕ್ರಮ ನಡೆಸಿಕೊಟ್ಟರು.