ಜನನ, ಮರಣ ಪ್ರಮಾಣಪತ್ರ ಎಚ್ಚರಿಕೆಯಿಂದ ನೀಡಿ-ಜಿಪಂ ಸಿಇಒವ್ಯಕ್ತಿಯ ಜನನ ಮತ್ತು ಮರಣ ಪ್ರಮಾಣಪತ್ರಗಳು ಸದ್ಯದ ಹಾಗೂ ಭವಿಷ್ಯದ ದಿನಗಳಲ್ಲಿ ಮಹತ್ವದ ದಾಖಲೆಗಳಾಗಿವೆ. ಜನನ ಪ್ರಮಾಣಪತ್ರ ಪಡೆಯುವುದು ಮಗುವಿನ ಮೊದಲ ಹಕ್ಕಾಗಿದೆ. ಮಗುವನ್ನು ಶಾಲೆಗೆ ಸೇರಿಸಲು, ಉದ್ಯೋಗಕ್ಕಾಗಿ, ಆಧಾರ್ ಕಾರ್ಡ್ ಪಡೆಯಲು, ವಿಮಾ ಪಾಲಿಸಿ ಪಡೆಯಲು, ಪಡಿತರ ಚೀಟಿ ಪಡೆಯಲು, ವಿವಾಹ ನೋಂದಣಿ ಮುಂತಾದ ಸಂದರ್ಭಗಳಲ್ಲಿ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅದರಂತೆ ವಿಮಾ ಹಣ ಪಡೆಯಲು, ಆಸ್ತಿಯ ಹಕ್ಕನ್ನು ನಿರ್ಧಾರ ಮಾಡಲು, ಪಿಂಚಣಿ ಹಕ್ಕು ಹೊಂದಲು, ಅನುಕಂಪದ ಆಧಾರದ ನೌಕರಿ, ಅಪಘಾತ ಪರಿಹಾರ ಪಡೆಯಲು, ಮುಂತಾದ ವಿಷಯಗಳಲ್ಲಿ ಮರಣ ಪ್ರಮಾಣದ ಅಗತ್ಯ ಹಾಗೂ ಕಡ್ಡಾಯವಿದೆ.