ಕೊಪ್ಪಳ: ಅಂತರ್ಜಾತಿ ಮದುವೆಯಾದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ!ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಭಾಗ್ಯನಗರದಲ್ಲಿ ಅಮಾನವೀಯ ಪದ್ಧತಿಯೊಂದು ಅನಾವರಣವಾಗಿದೆ. ಅಂತರ್ಜಾತಿಯಲ್ಲಿ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಸಮಾಜದಿಂದಲೇ ಬಹಿಷ್ಕಾರ ಹಾಕಲಾಗಿದ್ದು, ಇತ್ಯರ್ಥಪಡಿಸಲು ಲಕ್ಷ ರುಪಾಯಿ ದಂಡ ಬೇಡಿಕೆ ಇಟ್ಟಿರುವ ವಿಕೃತ ಪ್ರಕರಣ ಬೆಳಕಿಗೆ ಬಂದಿದೆ.