200 ಕೆಜಿ ಇದ್ದ ಟೊಮ್ಯಾಟೊ ಈಗ ಕೇಳೋರಿಲ್ಲಎರಡು ತಿಂಗಳಿಂದ ಟೊಮ್ಯಾಟೊ ಕೆಜೆಗೆ ₹200ವರೆಗೂ ದರ ಏರಿಕೆಯಾಗಿತ್ತು. ಈ ನಡುವೆ ರಾಜ್ಯದಲ್ಲಿಯೇ ಮೊದಲ ಬಾರಿ ಎಂಬಂತೆ ದಾಖಲೆ ಪ್ರಮಾಣದಲ್ಲಿ ಟೊಮ್ಯಾಟೊಕ್ಕೆ ಭಾರಿ ಬೇಡಿಕೆ ಬಂದಿತ್ತು. ನೆರೆಯ ರಾಜ್ಯಗಳಿಂದಲೂ ಬೆಂಗಳೂರು ಮಾರುಕಟ್ಟೆಗೆ ಟೊಮ್ಯಾಟೊ ತಂದು ಮಾರಾಟ ಮಾಡಿ ಅತ್ಯಧಿಕ ಲಾಭ ಪಡೆದವರಲ್ಲಿ ರೈತರಿಗಿಂತ ಕಮಿಷನ್ ಏಜೆಂಟ್ಗಳೇ ಹೆಚ್ಚು. ಆದರೆ, ರೈತ ಮಾತ್ರ ತಾನು ಬೆಳೆದ ಫಸಲಿನೊಂದಿಗೆ ಮಾರುಕಟ್ಟೆಗೆ ಬಂದು ಒಳ್ಳೆಯ ಲಾಭ ಪಡೆದುಕೊಂಡಿದ್ದ. ಟೊಮ್ಯಾಟೊ ದರ ಕೇಳಿದ ಗೃಹಣಿಯರು ಕೂಡ ತಲ್ಲಣಗೊಂಡಿದ್ದರು. ಆದರೆ ಈಗ ₹5ಗೆ ಕುಸಿದಿದೆ.