• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬೀದಿಬದಿ ವ್ಯಾಪಾರಸ್ಥರ ಅಂಗಡಿ ತೆರವು
ಹೊಸ ಬಸ್‌ ನಿಲ್ದಾಣ ಸಮೀಪ ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿ ಎಚ್ಚರಿಕೆ ನೀಡಿದ್ದಾರೆ. ಬಸ್‌ಸ್ಟ್ಯಾಂಡ್‌ ಮುಂಭಾಗ, ಬುದಗುಂಪಾ, ನವಲಿ ರಸ್ತೆಯ ಅಕ್ಕಪಕ್ಕ ಬೀದಿಬದಿ ವ್ಯಾಪಾರಿಗಳಿಂದ ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಪಿಐ ಸಿದ್ದರಾಮಯ್ಯ ಜಂಟಿಯಾಗಿ ಕೆಲ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿದರು.
ಗಂಗಾಮತ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡಿ
ಗಂಗಾಮತ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎಂದು ಹಾವೇರಿಯ ಜಿಲ್ಲೆಯ ಚೌಡದಾನಾಪುರದ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು. ನಗರದ ಅಂಬಿಗರ ಚೌಡಯ್ಯ ಸರ್ಕಲ್‌ಗೆ ಗುರುವಾರ ಭೇಟಿ ನೀಡಿ, ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು. ಗಂಗಾಮತ ಸಮಾಜವು ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿದ್ದರೂ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಸಮಾಜ ಅಭಿವೃದ್ಧಿಗೆ ಎಸ್ಟಿ ಮೀಸಲಾತಿ ಅನಿವಾರ್ಯವಾಗಿದೆ. ಮೀಸಲಾತಿ ಜಾರಿ ಮಾಡಲು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಹೀಗೆ ಮುಂದುವರಿದರೆ ಸಮಾಜದಿಂದ ದೆಹಲಿ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದರು.
ಹುಚ್ಚುನಾಯಿ ಕಡಿತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ
ಹುಚ್ಚುನಾಯಿ ಕಡಿತದ ಪರಿಣಾಮ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿ ಹುಚ್ಚುನಾಯಿಯೊಂದು ಸಂಜೆ ಸಂಚಾರ ಮಾಡುತ್ತಿರುವ ಜನರಿಗೆ ಕೈ, ಕಾಲು, ಮುಖ ನೋಡದೇ ಎಲ್ಲೆಂದರಲ್ಲಿ ಕಚ್ಚಿದೆ. ಸಾರ್ವಜನಿಕರು ನಾಯಿಯನ್ನು ಬೆನ್ನಟ್ಟಿ ಕೊಂದು ಹಾಕಿದ್ದಾರೆ. ಈ ಮೂಲಕ ಇನ್ನಷ್ಟು ಜನರಿಗೆ ನಾಯಿ ಕಡಿಯುವುದನ್ನು ತಪ್ಪಿಸಿದ್ದಾರೆ.
ಭತ್ತದ ಹುಲ್ಲಿಗೆ ಭಾರಿ ಡಿಮ್ಯಾಂಡ್
ತುಂಗಭದ್ರ ಎಡ, ಬಲದಂಡೆ ನಾಲೆಗಳ ಮುಖಾಂತರ ಬೆಳೆಯಲಾದ ಭತ್ತದ ಹುಲ್ಲಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಭೀಕರ ಬರದಲ್ಲಿ ಹುಲ್ಲಿನ ದರ ಏರಿಕೆಗೆ ಒಣಭೂಮಿ ರೈತರನ್ನು ಸಂಕಷ್ಟಿಕ್ಕೀಡು ಮಾಡಿದೆ.ಭತ್ತಕ್ಕೆ ಮಾತ್ರವಲ್ಲ ಭತ್ತದ ಹುಲ್ಲಿಗೂ ಭಾರಿ ಬೇಡಿಕೆ ಬಂದಿದೆ. ಎಕರೆ ಹುಲ್ಲಿಗೆ ಬರೋಬ್ಬರಿ ₹3000 ನಿಗದಿಯಾಗಿದೆ. ಒಂದು ಟ್ರ್ಯಾಕ್ಟರ್‌ಗೆ ೨ ಎಕರೆ ಹುಲ್ಲು ಅವಶ್ಯವಿದೆ. ಮಾಗಾಣಿಯಿಂದ (ನೀರಾವರಿ) ಮಳೆಯಾಶ್ರಿತ ಪ್ರದೇಶದ ರೈತರು ತಾವು ವಾಸವಿದ್ದ ಸ್ಥಳಕ್ಕೆ ಹಲ್ಲು ಒಯ್ಯುತ್ತಾರೆ. ಕಳೆದ ವರ್ಷ ಭತ್ತದ ಹುಲ್ಲಿಗೆ ಈ ಪರಿ ಬೇಡಿಕೆ ಇರಲಿಲ್ಲ. ಬರ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿದ್ದರಿಂದ ರೈತರಿಗೆ ಆರ್ಥಿಕ ಪೆಟ್ಟು ಬಿದ್ದಂತಾಗಿದೆ.
ಅಂಜನಾದ್ರಿಯಿಂದ ಸಂಸತ್ ಭವನದ ವರೆಗಿನ ರೈತರ ಪಾದಯಾತ್ರೆಗೆ ಚಾಲನೆ
ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳಿಗೆ ಜೋಡಣೆ ಮತ್ತು ತುಂಗಭದ್ರಾ ಆಲಮಟ್ಟಿ ಜಲಾಶದಲ್ಲಿರುವ ಹೂಳು ತೆರವಿಗೆ ಒತ್ತಾಯಿಸಿ ಅಂಜನಾದ್ರಿಯಿಂದ ಹೊಸ ದೆಹಲಿ ಸಂಸತ್ ಭವನದವರೆಗೆ ನಡೆಯುವ ರೈತರ ಪಾದಯಾತ್ರೆಗೆ ಬುಧವಾರ ಚಾಲನೆ ದೊರೆಯಿತು. ಯಲಬುರ್ಗಾ ತಾಲೂಕಿನ ಯಲಬೆಂಚಿ ಗ್ರಾಮದ ನಬಿಸಾಬ ಎಂ. ಹುಲಗೇರಿ ನೇತೃತ್ವದಲ್ಲಿ ಬುಧವಾರ ಅಂಜನಾದ್ರಿಯ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಕೈಗೊಂಡರು.
ಶಾಲಾ ಮಕ್ಕಳಿಗೆ ಕೆಟ್ಟ ಮೊಟ್ಟೆ ವಿತರಣೆ
ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕೆಟ್ಟಿರುವ ಮೊಟ್ಟೆ ನೀಡಿದ್ದಾರೆ. ಅವೆಲ್ಲ ದುರ್ವಾಸನೆ ಬೀರುತ್ತಿದ್ದವು ಎಂದು ವಿದ್ಯಾರ್ಥಿಗಳು ಸಿಆರ್‌ಪಿ ಅಧಿಕಾರಿಗಳ ಎದುರು ಬುಧವಾರ ಅಳಲು ತೋಡಿಕೊಂಡಿದ್ದಾರೆ. ಕೇಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ದೋಟಿಹಾಳ ಸಿಆರ್‌ಪಿ ಈರಣ್ಣ ಕರಡಕಲ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಮೊಟ್ಟೆ, ಬಾಳೆಹಣ್ಣುಗಳ ಕುರಿತು ಪರೀಶಿಲನೆ ನಡೆಸಿದಾಗ ಖುದ್ದಾಗಿ ವಿದ್ಯಾರ್ಥಿಗಳೇ ದೂರು ನೀಡಿದ್ದಾರೆ.
ಕನಕಾಚಲಪತಿ ದೇಗುಲದಲಿ ಬೆಳಗಿದ ಲಕ್ಷ ದೀಪಗಳು
ಕನಕಗಿರಿತಾಲೂಕಾಡಳಿತ, ಕನಕಾಚಲಪತಿ ವ್ಯವಸ್ಥಾಪನಾ ಸಮಿತಿಯ ಸಹಯೋಗದಲ್ಲಿ ಮೊದಲನೇ ಬಾರಿಗೆ ನಡೆದ ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಬೆಳಕಿನ ವೈಭವ ಕಣ್ತುಂಬಿಕೊಂಡರು.ಲಕ್ಷ ದೀಪೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ಅನ್ನಬಲಿ ಹಾಕುವುದು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ದೇವಸ್ಥಾನದಲ್ಲಿ ಹಣತೆಗಳಿಗೆ ಸಾಲುಗಂಬ ಆಕಾರ ಹೊಂದಿದ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ದೀಪ ಬೆಳಗಿಸಿದರು.
ಬುದ್ಧ, ಬಸವ, ಅಂಬೇಡ್ಕರ್‌ ಜಾಗತಿಕ ಮಹಾಪುರುಷರು
ಕೊಪ್ಪಳಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಜಾಗತಿಕ ಮಹಾಪುರುಷರಾಗಿದ್ದು, ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ಧತಿ, ಮೌಢ್ಯಗಳ ವಿರುದ್ಧ ಹೋರಾಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2023-24 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಕನಕಗಿರಿಯ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಆರೈಕೆಗೆ ಕೂಸಿನ ಮನೆ ಸಹಕಾರಿ: ಪಾಟೀಲ
ಕನ್ನಡಪ್ರಭ ವಾರ್ತೆ ಯಲಬುರ್ಗಾಮಕ್ಕಳೇ ಭವಿಷ್ಯದ ನಾಗರಿಕರು, ಮಕ್ಕಳ ಆರೈಕೆ ಅತಿ ಮುಖ್ಯವಾಗಿದ್ದು, ಗ್ರಾಪಂ ಕೂಸಿನ ಮನೆಗಳು ಸಹಕಾರಿಯಾಗಲಿವೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ್ ಹೇಳಿದರು.ಪಟ್ಟಣದ ತಾಪಂ ಸಾಮರ್ಥ್ಯ ಕೇಂದ್ರದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಅವಳಿ ತಾಲೂಕಿನ ಶಿಶುಪಾಲಕಿಯರಿಗೆ ಎರಡನೇ ಹಂತದ ೭ ದಿನಗಳ ಮಕ್ಕಳ ಆರೈಕೆದಾರರ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಶುಪಾಲನ ಕೇಂದ್ರದಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ಪಿಎಚ್‌ಡಿ ಪದವಿ ಪ್ರವೇಶಕ್ಕೂ 371 ಜೆ ಮೀಸಲು ಅನ್ವಯ
ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪದವಿ ಪ್ರವೇಶ ನೀಡುವ ಸಂದರ್ಭದಲ್ಲೂ 371 ಜೆ ವಿಶೇಷ ಸ್ಥಾನಮಾನದಡಿ ಕಲ್ಯಾಣ ಕರ್ನಾಟಕ ಭಾಗದ ವಿವಿಗಳಲ್ಲಿ ಶೇ.70 ಹಾಗೂ ರಾಜ್ಯದ ಇತರ ವಿವಿಗಳಲ್ಲಿ ಶೇ.8 ರಷ್ಟು ಸ್ಥಾನವನ್ನು ಈ ಭಾಗದ (ಕಲ್ಯಾಣ ಕರ್ನಾಟಕ) ವಿದ್ಯಾರ್ಥಿಗಳಿಗೆ ನೀಡಬೇಕು. ಈ ಕುರಿತು ಇದ್ದ ಗೊಂದಲಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡುವ ಮೂಲಕ ಗೊಂದಲ ನಿವಾರಿಸಿದ್ದಾರೆ.
  • < previous
  • 1
  • ...
  • 491
  • 492
  • 493
  • 494
  • 495
  • 496
  • 497
  • 498
  • 499
  • ...
  • 512
  • next >
Top Stories
ತುಮಕೂರಿಂದ ಲೋಕಸಭೆ ಸ್ಪರ್ಧೆ ಮಾಡಲ್ಲ : ಸೋಮಣ್ಣ
ಸಮೀರ್‌ಗೆ 5 ತಾಸು ಪೊಲೀಸರಿಂದ ಗ್ರಿಲ್‌
3 ವಿದೇಶಗಳಲ್ಲಿ ವೀರೇಂದ್ರ ಪಪ್ಪಿ ವ್ಯವಹಾರ?
ಟ್ರಿಪಲ್‌ ಏರ್‌ಡಿಫೆನ್ಸ್‌ ಪರೀಕ್ಷೆ ಯಶಸ್ವಿ
ಗಗನಯಾನದ ಏರ್‌ಡ್ರಾಪ್‌ ಪರೀಕ್ಷೆ ಯಶಸ್ವಿ - ಸಿಬ್ಬಂದಿಯ ಸುರಕ್ಷಿತ ಮರಳುವಿಕೆಗೆ ಇದು ಅಗತ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved