ರಕ್ತದಾನದಿಂದ ಮನುಷ್ಯರ ಜೀವ ಉಳಿಸಬಹುದು: ನ್ಯಾ.ಎಂ.ಡಿ.ರೂಪದಿನ ನಿತ್ಯ ಸಂಭವಿಸುತ್ತಿರುವ ಅಪಘಾತದ ಗಾಯಾಳುಗಳಿಗೆ, ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ, ರಕ್ತಹೀನತೆ ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ತುರ್ತಾಗಿ ರಕ್ತದ ಅಗತ್ಯವಿದೆ. 18 ರಿಂದ 65 ವರ್ಷದ ನಡುವಿನ ಆರೋಗ್ಯವಂತರು ರಕ್ತದಾನ ಮಾಡಿ ಇಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು. ಜೊತೆಗೆ ರಕ್ತದಾನ ಕುರಿತು ಬೇರೆಯವರಿಗೂ ರಕ್ತದಾನ ಮಾಡಲು ಜಾಗೃತಗೊಳಿಸಲು ಮುಂದಾಗಬೇಕು.