ಮನ್ಮುಲ್ ಚುನಾವಣೆ: ಗೆದ್ದವರ ಅಭಿಮಾನಿಗಳಿಂದ ವಿಜಯೋತ್ಸವಮತ ಎಣಿಕೆ ಸ್ಥಳವಾದ ಮೈಷುಗರ್ ಪ್ರೌಢಶಾಲೆ ಎದುರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ನೆರೆದಿದ್ದರು. ಮೊಬೈಲ್ ಮೂಲಕವೇ ಫಲಿತಾಂಶವನ್ನು ತಿಳಿದುಕೊಂಡು ಹೊರಗಿನಿಂದಲೇ ಅಭ್ಯರ್ಥಿಗಳ ಪರ ಜೈಕಾರ ಮೊಳಗಿಸಿದರು. ಪಟಾಕಿಗಳನ್ನು ಸಿಡಿಸಿದರು.