ನಮಗೆ ಕುಡಿಯಲು ಕಾವೇರಿ ನೀರು ಕೊಡಿ..!ಕೆಎಚ್‌ಬಿ ಬಡಾವಣೆ ನಿರ್ಮಾಣ ಮಾಡಿ ೨೦ ವರ್ಷ ಕಳೆದರೂ ಈವರೆಗೂ ಬಡಾವಣೆ ಜನರಿಗೆ ಕುಡಿಯುವ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ೨೦೧೯ರಲ್ಲಿ ಕರ್ನಾಟಕ ಗೃಹಮಂಡಳಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಿದೆ. ಕಳೆದ ೬ ವರ್ಷಗಳಿಂದ ಬಡಾವಣೆ ನಿವಾಸಿಗಳು ಕಂದಾಯ ಕಟ್ಟುತ್ತಿದ್ದಾರೆ. ಆದರೆ, ಈವರೆಗೂ ನಗರಸಭೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ.