ರೆಕಾರ್ಡ್ ರೂಂನಲ್ಲಿ ಖಾಸಗಿ ವ್ಯಕ್ತಿ ಕರ್ತವ್ಯ: ರೈತರಿಂದ ತಹಸೀಲ್ದಾರ್ ಗೆ ದೂರುತುರ್ತು ಸಂದರ್ಭದಲ್ಲಿ ಮಾತ್ರ ಕಡ್ಡಾಯವಾಗಿ ತಹಸೀಲ್ದಾರ್ ಅವರ ಅನುಮತಿ ಪಡೆದು ಅಭಿಲೇಕಾಲಯಕ್ಕೆ ಪ್ರವೇಶಿಸಬಹುದು ಎನ್ನುವ ಆದೇಶದ ಪ್ರತಿಯನ್ನು ಅಂಟಿಸಿದ್ದಾರೆ. ಗ್ರಾಮ ಲೆಕ್ಕಿಗರಿಗೂ ಪ್ರವೇಶ ನಿರಾಕರಿಸಲ್ಪಟ್ಟಿರುವ ಕಂದಾಯ ಇಲಾಖೆ ಅಭಿಲೇಖಾಲಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯ ಕೊಟ್ರೇಶ್ ಎನ್ನುವ ವ್ಯಕ್ತಿ ಯಾವುದೇ ಅಡೆತಡೆಯಿಲ್ಲದೆ ಬೇನಾಮಿಯಾಗಿ ಕೆಲಸ ಮಾಡುತ್ತಿದ್ದಾನೆ.