ಡಿ.೨೮ರಂದು ಮೈಷುಗರ್ ಪ್ರೌಢಶಾಲೆ ಅಮೃತ ಮಹೋತ್ಸವಮಧ್ಯಾಹ್ನ ೨ ರಿಂದ ೩ ಗಂಟೆಯವರೆಗೆ ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆ. ೩ ರಿಂದ ೪ರವರೆಗೆ ಶೈಕ್ಷಣಿಕ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರಗೌಡ ವಹಿಸುವರು. ವಿಚಾರ ಮಂಡನೆಯನ್ನು ನಿವೃತ್ತ ಮುಖ್ಯಶಿಕ್ಷಕ ಡಾ.ಎಂ.ಎಸ್.ಮನ್ನಾರ್ ಕೃಷ್ಣರಾವ್, ವೈದ್ಯ ಡಾ.ಎಂ.ಮಾದಯ್ಯ, ಶಿಕ್ಷಣ ತಜ್ಞ ಎನ್.ಎನ್.ಪ್ರಹ್ಲಾದ್, ವಿಶ್ರಾಂತ ಪ್ರಾಂಶುಪಾಲ ಡಾ.ಕೆಂಪಯ್ಯ ಮಾಡಲಿದ್ದಾರೆ.