ಮದ್ಯ ವರ್ಜನ ಶಿಬಿರದಲ್ಲಿ ವ್ಯಸನ ಮುಕ್ತರಾದ 67 ಮಂದಿ: ಮದ್ಯ ರಾಕ್ಷಸನ ದಹನಬೂಕನಕೆರೆ ಗ್ರಾಪಂ, ಬೆಳ್ತಂಗಡಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ 1887ನೇ ಮದ್ಯವರ್ಜನ ಶಿಬಿರದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ 67 ಜನರು ಭಾಗವಹಿಸಿ ವ್ಯಸನ ಮುಕ್ತಗೊಂಡು ಹೊಸ ಬದುಕಿನ ಕಡೆ ಮುನ್ನಡೆದರು.