ಸಾವಿರಾರು ಹನುಮ ಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ ಸಂಭ್ರಮಹನುಮ ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಐತಿಹಾಸಿಕ ಕೋಟೆ ನಗರಿ ಕೇಸರಿಮಯವಾಗಿತ್ತು. ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಬಾವುಟ, ಬಂಟಿಂಗ್ಸ್ ಗಳಿಂದ ರಾರಾಜಿಸುತ್ತಿದ್ದವು. ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹನುಮ ಮಾಲಾಧಾರಿಗಳು, ಹಿಂದೂ ಕಾರ್ಯಕರ್ತರು ಸುಮಾರು 4 ಕಿಮೀ ವರೆಗೆ ಮೆರವಣಿಗೆ ನಡೆಸಿದರು.