ಸಾಮೂಹಿಕ ಕೃಷಿ ಪದ್ಧತಿ ರೈತರಿಗೆ ವರದಾನ: ಪಿ.ವಿ.ಜೋಷಿಹನಿ ಹಾಗೂ ತುಂತುರು ಯೋಜನೆಯಲ್ಲಿ ಸಾಮೂಹಿಕ ಕೃಷಿ ಪದ್ಧತಿ ಬಹಳ ಮುಖ್ಯವಾಗಿದೆ. ಇದ್ದರಿಂದ ಮಾರುಕಟ್ಟೆ ಸೌಲಭ್ಯ, ರೈತರಿಗೆ ಬೆಳೆ ವಿಮೆ, ರೈತರ ಖಾತೆಗೆ ಲಾಭಾಂಶ ನೇರಾ ವರ್ಗಾವಣೆಯಾಗುವುದರ ಜತೆಗೆ ಹೆಚ್ಚಿನ ಅನುಕೂಲ ದೊರೆಯಲಿವೆ. ಸಾಮೂಹಿಕ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವುದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಗುಣಮಟ್ಟದ ಬೆಳೆಯನ್ನು ಬೆಳೆದು ರೈತರು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು.