‘ಅಕ್ಷರ ಜಾತ್ರೆ’ ನಡೆಯುವ ಜಾಗ ಫೈನಲ್; ಅಧಿಕೃತ ಘೋಷಣೆಯೊಂದೇ ಬಾಕಿಮಂಡ್ಯದ ಚಿಕ್ಕಮಂಡ್ಯ ಸಮೀಪ, ಕಿರಗಂದೂರು ಗೇಟ್ ಸಮೀಪ ಹಾಗೂ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಮೂರು ಜಾಗಗಳನ್ನು ಸಮ್ಮೇಳನ ಆಯೋಜನೆಗೆ ವೀಕ್ಷಣೆ ನಡೆಸಲಾಗಿತ್ತು. ಇದರಲ್ಲಿ ಚಿಕ್ಕಮಂಡ್ಯ ಮತ್ತು ಕಿರಗಂದೂರು ಗೇಟ್ ಬಳಿಯ ಜಾಗಗಳನ್ನು ವೀಕ್ಷಿಸಿದಾಗ ಅಲ್ಲಿ ತೇವಾಂಶ ಹೆಚ್ಚಾಗಿದ್ದು, ಭೂಮಿ ಜಿಗುಟು ಮಣ್ಣಿನಿಂದ ಕೂಡಿರುವುದು ಕಂಡುಬಂದಿದೆ. ಈ ಜಾಗಗಳಲ್ಲಿ ಸಮ್ಮೇಳನ ಆಯೋಜನೆ ಮಾಡುವುದು ಅಷ್ಟು ಸೂಕ್ತವಲ್ಲವೆಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.