ಮೊಬೈಲ್ ದುರ್ಬಳಕೆಯಿಂದ ಜನಪದ ಕಲೆಗಳು ಮಾಯ: ಡಿ.ಉಮೇಶ್ಕಲೆಗಳು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳ ಬಗೆಗಿನ ಅರಿವನ್ನು ಜನರಿಗೆ ಮೂಡಿಸಿದೆ. ನೊಂದ ಜನರ ಪ್ರತಿಭಟನೆ ಅಸ್ತ್ರವಾಗಿದೆ. ಮನುಷ್ಯರ ತುಮುಲವನ್ನು ಹೊರಹೊಮ್ಮಿಸುವ ಕ್ಷೇತ್ರವಾಗಿದೆ. ಶ್ರಮಿಕ ಜೀವಿಗಳಿಗೆ ಮಾನಸಿಕ, ದೈಹಿಕ ಭಾದೆ ನಿವಾರಿಸುವ ಮುಲಾಮು ಆಗಿದೆ. ಮನರಂಜನೆಗಷ್ಟೆ ಸೀಮಿತವಾಗದೆ ತಿಳಿವಳಿಕೆ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗಿದೆ.