ತಾಯಿ ಎದೆ ಹಾಲು ಮಗುವಿಗೆ ಅಮೃತವಿದ್ದಂತೆ: ಡಾ.ಮಲ್ಲಿಕಾತಾಯಿ ಎದೆ ಹಾಲು ಪರಿಶುದ್ಧ ಹಾಗೂ ರೋಗಾಣು ರಹಿತವಾಗಿದೆ. ಮಗುವಿಗೆ ಯಾವುದೇ ರೋಗ ಬರದಂತೆ ಅನೇಕ ಸೋಂಕುಗಳಿಂದ ವಿಶೇಷವಾಗಿ ನ್ಯೂಮೋನಿಯಾ, ಅತಿಸಾರ ಭೇದಿಯಿಂದ ರಕ್ಷಿಸುತ್ತದೆ. ಜೊತೆಗೆ ತಾಯಿ ಮತ್ತು ಮಗುವಿನ ಮಧ್ಯ ಪ್ರೀತಿ, ಬಾಂಧವ್ಯ, ಮಮತೆ, ವಾತ್ಸಲ್ಯ ಹಾಗೂ ಕರುಣೆಗಳನ್ನು ಬೆಸೆಯುತ್ತದೆ.