ಕಾಂಗ್ರೆಸ್, ಮೈತ್ರಿ ಅಭ್ಯರ್ಥಿಗಳನ್ನು ತಿರಸ್ಕರಿಸಿ ಬಿಎಸ್ಪಿ ಗೆಲ್ಲಿಸಿ: ಶಿವಶಂಕರ್ ಮನವಿಜನ ಪರ, ಸಮಾಜ ಪರ ಗಟ್ಟಿ ದ್ವನಿಯಾಗಿ ಬಿಎಸ್ಪಿ ಕೆಲಸ ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್‌ನ ಯಾವುದೇ ಅಭ್ಯರ್ಥಿ ಗೆದ್ದರೂ ಕರ್ನಾಟಕಕ್ಕೆ ಪ್ರಯೋಜನವಿಲ್ಲ. ಇವರು ಗೆದ್ದ ನಂತರ ರಾಜ್ಯ ಹಾಗೂ ಜನರ ಅಭಿವೃದ್ಧಿ ಪರ ಕೇಂದ್ರದಲ್ಲಿ ಮಾತನಾಡುವುದಿಲ್ಲ. ಕರ್ನಾಟಕದ ಸಂಸದರು ಪ್ರವಾಹ , ಬರಗಾಲ ಬಂದಾಗ ಮಾತನಾಡಲಿಲ್ಲ. ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನಿಲ್ಲಿಸಿದಾಗ ದ್ವನಿ ಎತ್ತಲಿಲ್ಲ. ಬಿಜೆಪಿ ಸಂವಿಧಾನ ವಿರೋಧಿ.