ಲೋಕಸಭಾ ಚುನಾವಣೆ ಹಿನ್ನೆಲೆ ಬಸ್‌ಗಳ ಕೊರತೆ: ಸಂಚಾರಕ್ಕೆ ಪರದಾಟಬೆಂಗಳೂರು-ಮೈಸೂರು ಕಡೆಯಿಂದ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು, ತಮ್ಮೂರುಗಳತ್ತ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಕೆಲವರು ಮತದಾನ ಮಾಡಲೆಂದೇ ತಮ್ಮೂರಿನತ್ತ ಬಂದು ಬಸ್ಸುಗಳಿಲ್ಲ ಪೇಚಿಗೆ ಸಿಲುಕಿದ್ದರೆ, ಮತ್ತೆ ಕೆಲವರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ದೂರವಾಣಿ ಕರೆ ಮಾಡಿ ದ್ವಿಚಕ್ರ ವಾಹನಗಳು, ಇತರೆ ವಾಹನಗಳನ್ನು ತರಿಸಿಕೊಂಡು ತೆರಳುತ್ತಿದ್ದುದು ಕಂಡುಬಂತು.