ಏ.26ರ ಮತದಾನಕ್ಕೆ ಮಂಡ್ಯ ಜಿಲ್ಲಾಡಳಿತ ಸಂಪೂರ್ಣ ಸಜ್ಜು: ಜಿಲ್ಲಾಧಿಕಾರಿ ಡಾ.ಕುಮಾರಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೭,೭೯,೨೪೩ ಮಂದಿ ಮತದಾರರಿದ್ದು, ಈ ಪೈಕಿ ೮,೭೬,೧೧೨ ಮಂದಿ ಪುರುಷರು, ೯,೦೨,೦೬೩ ಮಂದಿ ಮಹಿಳೆಯರು ಹಾಗೂ ೧೬೮ ಇತರೆ ಮತದಾರರಿದ್ದಾರೆ. ಜಿಲ್ಲೆಯ ೧೮೨೪ ಮತಗಟ್ಟೆಗಳಿಗೆ ಆರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಆರ್‌ಪಿಎಫ್ ೭೨ ಜನರ ತಂಡ, ಎಸ್‌ಎಪಿ ಗುಜರಾತ್ ೨೧೬ ಜನರ ತಂಡ, ಒಟ್ಟು ನಾಲ್ಕು ಕಂಪನಿಗಳು ಭದ್ರತೆಯಲ್ಲಿ ತೊಡಗಿಸಿಕೊಳ್ಳಲಿವೆ.